ಬರಗಾಲ ಸನ್ನದ್ಧವಾಗಿ ಎದುರಿಸಲು ಸಿ.ಎಂ. ಜಿಲ್ಲೆಗೆ ಕಳುಹಿಸಿದ್ದಾರೆ : ಸಚಿವ ಜಾರಕಿಹೊಳಿ

ಬರಗಾಲ ಸನ್ನದ್ಧವಾಗಿ ಎದುರಿಸಲು ಸಿ.ಎಂ. ಜಿಲ್ಲೆಗೆ ಕಳುಹಿಸಿದ್ದಾರೆ : ಸಚಿವ ಜಾರಕಿಹೊಳಿ CM has sent [officials] to the district to prepare for and tackle the drought: Minister Jarkiholi

ಶಿಗ್ಗಾವಿ 04  : ನೂರು ವರ್ಷಗಳ ನಂತರ ಇಂತಹ ಬರಗಾಲ ಬಂದಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಇದನ್ನು ಸನ್ನದ್ಧವಾಗಿ ಎದುರಿಸಲು, ಪರಿಸ್ಥಿತಿ ತಿಳಿದುಕೊಳ್ಳಲು ಮುಖ್ಯಮಂತ್ರಿಗಳು ನನ್ನನ್ನು ಜಿಲ್ಲೆಗೆ ಕಳುಹಿಸಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಮೇಲುಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೇಸ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಸ್ತುತ ರಾಜ್ಯದಲ್ಲೇ ಹಾವೇರಿ ಜಿಲ್ಲೆಯಲ್ಲಿ ಮಳೆ ಚನ್ನಾಗಿ ಆಗಿದೆ ಹಾಗೂ ಬೆಳೆ ಸಹ ಉತ್ತಮವಾಗಿದೆ.

ಬರುವ ಎರಡು ತಿಂಗಳ ನಂತರ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.   ಶಾಸಕ ಯಾಸೀರ ಅಹ್ಮದಖಾನ ಪಠಾಣ, ಮಾಜಿ ಸಂಸದ ಮಂಜುನಾಥ ಕುನ್ನೂರ, ಬ್ಲಾಕ್ ಅಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಅಧ್ಯಕ್ಷ ಎಸ್‌.ಎಫ್‌.ಮಣಕಟ್ಟಿ, ಶಂಕರಗೌಡ ಪಾಟೀಲ, ಹನುಮರೆಡ್ಡಿ ನಡುವಿನಮನಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಹನುಮಂತ ಬಂಡಿವಡ್ಡರ, ಅಶೋಕ ಓಲೇಕಾರ, ಡಾ. ಬಸವರಾಜ, ಮಲ್ಲಮ್ಮ ಸೋಮನಕಟ್ಟಿ, ಹಜರತಲಿ ಚೂಡಿಗಾರ, ಆಸೀಫ್ ಕಣವಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.